• ಮಾತು ಮುತ್ತು - ಕವನ ವಾಚನ

  • Nov 18 2020
  • Length: 2 mins
  • Podcast

ಮಾತು ಮುತ್ತು - ಕವನ ವಾಚನ

  • Summary

  • ಮಾತು ಬರುವುದು ಎಂದು ಮಾತಾಡುವುದು ಬೇಡ;

    ಒಂದು ಮಾತಿಗೆ ಎರಡು ಅರ್ಥವುಂಟು.

    ಎದುರಿಗಿರುವವ ಕೂಡ ಮಾತ ಬಲ್ಲವ ಗೆಳೆಯ;

    ಬರಿದೆ ಆಡುವ ಮಾತಿಗರ್ಥವಿಲ್ಲ.

     

    ಕಡಲ ತಟಿಯಲಿ ತರುಣ ಬಲೆಯ ಬೀಸಿದ್ದಾನೆ;

    ಮೀನು ಬೇಳುವ ತನಕ ಕಾಯ ಬೇಕು.

    ಮೀನ ಹೊರೆಯನು ಹೊತು ಮನೆಗೆ ಬಂದಿದ್ದಾನೆ;

    ಹುಡುಕುತ್ತಲಿಹನವನು ಮುತ್ತಿಗಾಗಿ.

     

    ಮಾತು ಮುತ್ತೆನ್ನುವುದು ಬಲ್ಲವರ ಉಕ್ತಿ; ಬಿಡು.

    ಮೀನಿನಿಂದಲು ನಮಗೆ ಲಾಭವುಂಟು.

    ಮುತ್ತ ಹುಡುಕಲು ಹೋಗಿ ಮೀನತಂದಿದ್ದಾನೆ.

    ಅವನ ದುಡಿಮೆಗೆ ಕೂಡ ಅರ್ಥವುಂಟು.

     

    ಮನೆಗೆ ಬಂದಾಗವನ ಮಡದಿ ಮೆಲ್ಲನೆ ನಕ್ಕು

    ಮುತ್ತಕೊಟ್ಟಳು ಅವನ ಹಸಿದ ತುಟಿಗೆ.

    ಹೃದಯವನು ಕಲಕಿತ್ತು ಅವಳ ಮೌನದ ಮುತ್ತು.

    ಮುತ್ತು ಸಿಕ್ಕಿತು ಎಂದು ನಕ್ಕವನು.

    - ಕೆ ಎಸ್ ನರಸಿಂಹಸ್ವಾಮಿ

    ಕವನ ಸಂಕಲನ: ನವಿಲದನಿ


    https://sites.google.com/site/kavanasangraha/Home/ksn/naviladani

    Show More Show Less

What listeners say about ಮಾತು ಮುತ್ತು - ಕವನ ವಾಚನ

Average Customer Ratings

Reviews - Please select the tabs below to change the source of reviews.